ಈ ವಾರ ಒಟಿಟಿಯಲ್ಲಿ ಮನರಂಜನೆಯ ಮಹಾಪೂರ - ಮನೇಲಿ ಕುಳಿತು ನೋಡಲು ಬ್ಲಾಕ್‌ಬಸ್ಟರ್ ಸಿನಿಮಾಗಳು ಮತ್ತು ವೆಬ್ ಸರಣಿಗಳು!!

By Kavya Prasad Published: Jul 25, Saturday, 2026, 15:35 [IST]

ಪ್ರತಿ ವಾರದಂತೆ ಈ ವಾರವೂ ಮನರಂಜನಾ ಪ್ರಿಯರಿಗಾಗಿ ಹಲವು ಹೊಸ ಆಸಕ್ತಿಕರ ಸಿನಿಮಾಗಳು, ವೆಬ್ ಸರಣಿಗಳು, ಡಾಕ್ಯುಮೆಂಟರಿಗಳು ಹಾಗೂ ರಿಯಾಲಿಟಿ ಶೋಗಳು ವಿವಿಧ ಒಟಿಟಿ (OTT) ಪ್ಲಾಟ್‌ಫಾರ್ಮ್‌ಗಳಲ್ಲಿ ಬಿಡುಗಡೆಯಾಗಿವೆ. ಇತ್ತೀಚೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಪಡೆದು ಸೂಪರ್ ಹಿಟ್ ಎನಿಸಿಕೊಂಡಿದ್ದ ಕೆಲ ಪ್ರಮುಖ ಸಿನಿಮಾಗಳು ಸಹ ಈ ವಾರ ಡಿಜಿಟಲ್ ಅಂಗಳಕ್ಕೆ ಕಾಲಿಟ್ಟಿವೆ. ಮನೆಮಂದಿಯೆಲ್ಲಾ ಕುಳಿತು ವೀಕ್ಷಿಸಬಹುದಾದ ಹಾಸ್ಯ, ಥ್ರಿಲ್ಲರ್, ಹಾರರ್ ಹಾಗೂ ಭಾವನಾತ್ಮಕ ಕಥಾಹಂದರ ಹೊಂದಿರುವ ಪ್ರಮುಖ ಚಿತ್ರಗಳ ಸಂಪೂರ್ಣ ವಿವರ ಇಲ್ಲಿದೆ.

CANVA

ಮೊದಲನೆಯದಾಗಿ, ಶಾಲಾ ಶಿಕ್ಷಣ ಮತ್ತು ಹಾಸ್ಯ ಕಥಾಹಂದರ ಹೊಂದಿರುವ 'ಆದರ್ಶ್ ಬಾಲ ವಿದ್ಯಾಮಂದಿರ್' ಎಂಬ ಪ್ರಮುಖ ಹಿಂದಿ ವೆಬ್ ಸರಣಿಯು ಈ ವಾರ ಒಟಿಟಿಗೆ ಲಭ್ಯವಾಗಿದೆ. ಈ ಸರಣಿಯು 'ಆದರ್ಶ್ ಬಾಲ ವಿದ್ಯಾಮಂದಿರ್' ಎಂಬ ಸರ್ಕಾರಿ ಶಾಲೆಯೊಂದರ ವಿಶಿಷ್ಟ ವಾತಾವರಣ ಮತ್ತು ಅಲ್ಲಿ ನಡೆಯುವ ಘಟನೆಗಳ ಕುರಿತಾದ ಸ್ವಾರಸ್ಯಕರ ಕಥೆಯನ್ನು ಒಳಗೊಂಡಿದೆ.

ಸರ್ಕಾರಿ ಶಾಲೆಯೊಂದರ ಕಲಿಯಲು ಆಸಕ್ತಿ ತೋರದ, ತುಂಟ ಮಕ್ಕಳನ್ನು ಸರಿಪಡಿಸಿ, ಚೆನ್ನಾಗಿ ಕಲಿಸಿ ಪ್ರತಿಯೊಬ್ಬರನ್ನೂ ಪರೀಕ್ಷೆಯಲ್ಲಿ ಪಾಸು ಮಾಡಿಸುವ ಬೃಹತ್ ಜವಾಬ್ದಾರಿ ಆ ಶಾಲೆಯ ಪ್ರಿನ್ಸಿಪಲ್ ಮೇಲಿರುತ್ತದೆ. ಆದರೆ ಮಕ್ಕಳು ಕಲಿಯುವ ಗುಣ ಉಳ್ಳವರಲ್ಲದ ಕಾರಣ ಎದುರಾಗುವ ಸವಾಲುಗಳು ಮತ್ತು ತಮಾಷೆಯ ಸನ್ನಿವೇಶಗಳನ್ನು ಅತ್ಯಂತ ಹಾಸ್ಯಸ್ಪದವಾಗಿ ಚಿತ್ರಿಕರಿಸಲಾಗಿದೆ. ಸಂಪೂರ್ಣ ಹಾಸ್ಯಪ್ರಧಾನವಾದ ಈ ಮನರಂಜನಾತ್ಮಕ ವೆಬ್ ಸರಣಿಯನ್ನು ಪ್ರಸಿದ್ಧ ಅಮೆಜಾನ್ ಪ್ರೈಮ್ ವೀಡಿಯೊ (Amazon Prime Video) ಒಟಿಟಿಯಲ್ಲಿ ವೀಕ್ಷಿಸಬಹುದಾಗಿದೆ.

ದಕ್ಷಿಣ ಭಾರತದ ಚಿತ್ರರಂಗದಿಂದ ಪ್ರೇಕ್ಷಕರ ಮುಂದೆ ಬಂದಿರುವ ಅತ್ಯಂತ ಆಸಕ್ತಿಕರ ತಮಿಳು ಸಿನಿಮಾ 'ಕಾನ್ ಸಿಟಿ'. ಹಾಸ್ಯ ಮತ್ತು ಥ್ರಿಲ್ಲರ್ ಅಂಶಗಳ ರೋಮಾಂಚನಕಾರಿ ಸಂಯೋಜನೆಯನ್ನು ಒಳಗೊಂಡಿರುವ ಈ ಚಿತ್ರವು ಬಿಡುಗಡೆಯಾದ ದಿನದಿಂದಲೇ ಪ್ರೇಕ್ಷಕರ ಗಮನ ಸೆಳೆದಿದೆ. ಪ್ರತಿಭಾವಂತ ನಟ ಅರ್ಜುನ್ ದಾಸ್, 'ಹೃದಯಂ' ಖ್ಯಾತಿಯ ಅನ್ನಾ ಬೆನ್ ಹಾಗೂ ಜನಪ್ರಿಯ ಹಾಸ್ಯ ನಟ ಯೋಗಿ ಬಾಬು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ವಿಶಿಷ್ಟ ಸಿನಿಮಾವನ್ನು ಪ್ರಸಿದ್ಧ ನೆಟ್‌ಫ್ಲಿಕ್ಸ್ (Netflix) ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ವೀಕ್ಷಕರು ವೀಕ್ಷಿಸಬಹುದಾಗಿದೆ. ಪ್ರಮುಖ ನಟರ ನಟನೆ ಮತ್ತು ಗಟ್ಟಿಯಾದ ಕಥಾಹಂದರ ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದೆ.

ಬರಹಗಾರ ದಿವ್ಯಾ ಪ್ರಕಾಶ್ ದುಬೆ ಅವರು ಬರೆದಿರುವ ಅತ್ಯಂತ ಜನಪ್ರಿಯ 'ಮುಸಾಫಿರ್ ಕೆಫೆ' ಹೆಸರಿನದೇ ಕಾದಂಬರಿಯನ್ನು ಆಧರಿಸಿ ನಿರ್ಮಿಸಲಾದ 'ಮುಸಾಫಿರ್ ಕೆಫೆ' ಸಿನಿಮಾವು ಸಹ ಈ ವಾರ ಡಿಜಿಟಲ್ ಜಗತ್ತಿಗೆ ಕಾಲಿಟ್ಟಿದೆ. ಬಾಲಿವುಡ್‌ನ ವಿಶಿಷ್ಟ ಹಾಗೂ ಪ್ರತಿಭಾವಂತ ನಟ ವಿಕ್ರಾಂತ್ ಮಸ್ಸಿ ಅವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ ಈ ಸಿನಿಮಾವು ಆಧುನಿಕ ಬದುಕು, ಪಯಣ ಮತ್ತು ಸಂಬಂಧಗಳ ಸುಂದರ ಚಿತ್ರಣವನ್ನು ನೀಡುತ್ತದೆ. ಕಾದಂಬರಿಯ ಆತ್ಮವನ್ನು ಹಾಳು ಮಾಡದೆ ಅತ್ಯಂತ ನೈಜವಾಗಿ ತೆರೆಯ ಮೇಲೆ ತಂದಿರುವ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್ (Netflix) ಒಟಿಟಿಯಲ್ಲಿ ವೀಕ್ಷಣೆಗೆ ಲಭ್ಯವಾಗಿಸಲಾಗಿದೆ.

ಇನ್ನು ಮಲಯಾಳಂ ಚಿತ್ರರಂಗದಿಂದ ಮೂರು ಪ್ರಮುಖ ಸಿನಿಮಾಗಳು ಈ ವಾರ ಒಟಿಟಿ ಪ್ರಿಯರ ಮುಂದೆ ಬಂದಿವೆ. ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಎನಿಸಿಕೊಂಡಿದ್ದ ಟೊವಿನೊ ಥಾಮಸ್ ಮತ್ತು ಖಯಾದು ಲೋಹರ್ ಕಾಂಬಿನೇಷನ್‌ನ ಹೊಸ ಸಿನಿಮಾ ಇದೀಗ ಒಟಿಟಿಗೆ ಬಂದಿದೆ. 1950ರ ದಶಕದ ಹಿನ್ನೆಲೆಯನ್ನು ಹೊಂದಿರುವ ಈ ಕಲಾತ್ಮಕ ಹಾಗೂ ದೃಶ್ಯ ವೈಭವದ ಮಲಯಾಳಂ ಸಿನಿಮಾವನ್ನು ಜಿಯೋ ಹಾಟ್‌ಸ್ಟಾರ್ (Jio Hotstar) ಒಟಿಟಿಯಲ್ಲಿ ಪ್ರೇಕ್ಷಕರು ವೀಕ್ಷಿಸಬಹುದಾಗಿದೆ.

ಹಾರರ್ ಮತ್ತು ಕಾಮಿಡಿ ಪ್ರಿಯರಿಗಾಗಿ 'ಸೀಕ್ರೆಟ್ ಆಫ್ ಕಳಿಂಗ' ಎಂಬ ಮತ್ತೊಂದು ವಿಶಿಷ್ಟ ಮಲಯಾಳಂ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಹೆಸರೇ ಸೂಚಿಸುವಂತೆ ಪ್ಯಾರಾನ್ಯಾಚುರಲ್ (ಅತೀತ ಶಕ್ತಿಗಳ) ಅಂಶಗಳ ಸುತ್ತ ಹೆಣೆದಿರುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಹಾರರ್ ಜೊತೆಗೆ ಮನರಂಜನೆಯನ್ನು ನೀಡುವ ಈ ಕಾಮಿಡಿ ಚಿತ್ರವನ್ನು ಸನ್ ನೆಕ್ಸ್ಟ್ (Sun NXT) ಒಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಕೆಲ ವಾರಗಳ ಹಿಂದೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ದೇಶಾದ್ಯಂತ ಸಿನಿಮಾ ಪ್ರೇಮಿಗಳು ಮತ್ತು ವಿಮರ್ಶಕರಿಂದ ಭರಪೂರ ಮೆಚ್ಚುಗೆ ಹಾಗೂ ಶ್ಲಾಘನೆ ಗಳಿಸಿಕೊಂಡಿದ್ದ ಮತ್ತೊಂದು ಮಲಯಾಳಂ ಪ್ರಶಸ್ತಿ ವಿಜೇತ ಚಿತ್ರವೂ ಒಟಿಟಿಗೆ ಆಗಮಿಸುತ್ತಿದೆ. ಒಬ್ಬ ಸಣ್ಣ ಬಾಲಕ ತನಗಿಲ್ಲದ ತಾಯಿಯನ್ನು ಹುಡುಕುತ್ತಾ ಸಾಗುವ ಅತ್ಯಂತ ಭಾವನಾತ್ಮಕ ಮತ್ತು ಹೃದಯಸ್ಪರ್ಶಿ ಕಥಾಹಂದರವನ್ನು ಈ ಸಿನಿಮಾ ಹೊಂದಿದೆ. ಈ ಸುಂದರ ಹಾಗೂ ಮಾನವೀಯ ಸಂಬಂಧಗಳ ಕಥೆಯನ್ನು ಹೊಂದಿರುವ ಸಿನಿಮಾವನ್ನು ಜೀ 5 (Zee5) ಒಟಿಟಿಯಲ್ಲಿ ಕೆಲವೇ ದಿನಗಳಲ್ಲಿ ವೀಕ್ಷಕರು ವೀಕ್ಷಿಸಬಹುದಾಗಿದೆ. ನಿಮ್ಮ ನೆಚ್ಚಿನ ಶೈಲಿಯ ಸಿನಿಮಾವನ್ನು ಆಯ್ಕೆ ಮಾಡಿಕೊಂಡು ಈ ವಾರಾಂತ್ಯದಲ್ಲಿ ಒಟಿಟಿಯಲ್ಲಿ ವೀಕ್ಷಿಸಿ ಆನಂದಿಸಿ.

OTT

Comments

Sign in to comment
Please to leave a comment on this article.
Top Stories
Subscribe to Our Newsletter

Get the latest articles delivered to your inbox.

Rakul Preet Singh Enjoys a Lovely Outing with Her Boyfriend
Rakul Preet Singh Enjoys a Lovely Outing with Her Boyfriend