'ತಬಾಹಿ' ಯಶಸ್ಸಿನ ಬೆನ್ನಲ್ಲೇ 'ಟಾಕ್ಸಿಕ್' ಹೊಸ ಮೆಲೋಡಿ ಧಮಾಕ - 'ಮನಮೋಹಕ' ಗೀತೆಯಲ್ಲಿ ಯಶ್-ತಾರಾ ಸುತಾರಿಯಾ ಕ್ಯೂಟ್ ಕೆಮಿಸ್ಟ್ರಿ!!

By Kavya Prasad Published: Jul 21, Tuesday, 2026, 12:30 [IST]

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್‌ದಾಸ್ ನಿರ್ದೇಶನದ ಬಹುನಿರೀಕ್ಷಿತ 'ಟಾಕ್ಸಿಕ್' ಚಿತ್ರದ ಕಡೆಯಿಂದ ಅವರ ಕೋಟ್ಯಂತರ ಅಭಿಮಾನಿಗಳಿಗೆ ಮತ್ತೊಂದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಈಗಾಗಲೇ ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದ ಬೋಲ್ಡ್ ಹಾಗೂ ರೊಮ್ಯಾಂಟಿಕ್ ಶೈಲಿಯ 'ತಬಾಹಿ' ಹಾಡಿನ ಅಭೂತಪೂರ್ವ ಯಶಸ್ಸಿನ ಬೆನ್ನಲ್ಲೇ, ಚಿತ್ರತಂಡವೀಗ ತನ್ನ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ.

https://www.youtube.com/@zeemusicsouth | https://x.com/Toxic_themovie

ಇಂದು (ಜುಲೈ 21) ಬೆಳಿಗ್ಗೆ 11:33ಕ್ಕೆ ಅಧಿಕೃತವಾಗಿ ರಿಲೀಸ್ ಆಗಿರುವ 'ಮನಮೋಹಕ..' ಎಂಬ ಈ ಪ್ರಣಯಗೀತೆ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡಿಂಗ್ ಸೃಷ್ಟಿಸುತ್ತಿದ್ದು, ಯಶ್ ಹಾಗೂ ತಾರಾ ಸುತಾರಿಯಾ ಜೋಡಿಯ ಮೋಡಿ ಅಭಿಮಾನಿಗಳ ಮನಗೆದ್ದಿದೆ. ಮೊದಲ ಹಾಡಿಗೆ ಸಿಕ್ಕ ಅಭೂತಪೂರ್ವ ಅಭಿನಂದನೆಗಳ ನಂತರ, ಈ ಮಧುರವಾದ ಗೀತೆಯು ಯಶ್ ಅಭಿಮಾನಿಗಳಲ್ಲಿ ಹಾಗೂ ಚಲನಚಿತ್ರ ಪ್ರೇಮಿಗಳಲ್ಲಿ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿದೆ.

ಚಿತ್ರದ ಮೊದಲ ಹಾಡಾದ 'ತಬಾಹಿ'ಯಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಸಖತ್ ರೊಮ್ಯಾಂಟಿಕ್ ಹಾಗೂ ಬೋಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದರು. ಆದರೆ, ಇಂದು ಬಿಡುಗಡೆಯಾಗಿರುವ 'ಮನಮೋಹಕ' ಹಾಡು ಸಂಪೂರ್ಣವಾಗಿ ಭಿನ್ನವಾದ, ಮೆಲೋಡಿ ಪ್ರಿಯರ ಮನಸ್ಸಿಗೆ ಆಹ್ಲಾದ ನೀಡುವ ಸುಂದರ ಪ್ರಣಯಗೀತೆಯಾಗಿದೆ.

ಈ ಹಾಡಿನಲ್ಲಿ ಯಶ್ ಹಾಗೂ ಬಾಲಿವುಡ್ ನಟಿ ತಾರಾ ಸುತಾರಿಯಾ ಅವರ ಜೋಡಿ ಅತ್ಯಂತ ಪ್ರೇಮಮಯವಾಗಿ ಕಣ್ಣಿಗೆ ಕಟ್ಟುವಂತೆ ಮೂಡಿಬಂದಿದೆ. ಇಬ್ಬರ ನಡುವಿನ ಸ್ಕ್ರೀನ್ ಕೆಮಿಸ್ಟ್ರಿ ಮತ್ತು ಪ್ರೇಮಪೂರ್ವಕ ಸನ್ನಿವೇಶಗಳು ಪ್ರೇಕ್ಷಕರನ್ನು ಆಕರ್ಷಿಸುತ್ತಿವೆ. ವಿಶೇಷವೆಂದರೆ, ಈ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಮತ್ತು ಲೇಡಿ ಸೂಪರ್‌ಸ್ಟಾರ್ ನಯನತಾರಾ ಕೂಡ ಕೆಲವು ಕ್ಷಣಗಳು ಕಾಣಿಸಿಕೊಂಡು ಹಾಡಿನ ವೈಭವವನ್ನು ಹೆಚ್ಚಿಸಿದ್ದಾರೆ.

ಈ ಮಧುರವಾದ ಪ್ರಣಯಗೀತೆಗೆ ಕನ್ನಡದ ಖ್ಯಾತ ಸಾಹಿತಿ ಪ್ರಮೋದ್ ಮರವಂತೆ ಅವರು ಅದ್ಭುತವಾಗಿ ಸಾಹಿತ್ಯ ಬರೆದಿದ್ದಾರೆ. 'ಟಾಕ್ಸಿಕ್' ಚಿತ್ರದ ಮೊದಲ ಹಾಡು 'ತಬಾಹಿ'ಗೆ ಹಿರಿಯ ನಿರ್ದೇಶಕ ಯೋಗರಾಜ್ ಭಟ್ ಅವರು ಸಾಹಿತ್ಯ ರಚಿಸಿದ್ದರು. ಈಗ 'ಮನಮೋಹಕ' ಸಾಂಗ್‌ಗೆ ಪ್ರಮೋದ್ ಮರವಂತೆ ಬರೆದಿರುವ ಭಾವಪೂರ್ಣ ಸಾಲುಗಳು ಗೀತೆಗೆ ಹೊಸ ಮೆರುಗು ತಂದಿವೆ. ಇನ್ನು, ಈ ಕಿವಿಗೆ ಇಂಪಾದ ಹಾಡನ್ನು ಗಾಯಕ ಸಿದ್ದಾರ್ಥ್ ಬಸರೂರ್ ಅವರು ತಮ್ಮ ವಿಶಿಷ್ಟ ಶೈಲಿ ಮತ್ತು ಮಧುರ ಧ್ವನಿಯಲ್ಲಿ ಹಾಡುವ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದಾರೆ. ಸಂಗೀತ ಸಂಯೋಜನೆ ಮತ್ತು ಗಾಯನ ಎರಡೂ ಅತ್ಯಂತ ಲಯಬದ್ಧವಾಗಿ ಮೂಡಿಬಂದಿರುವುದು ಮೆಲೋಡಿ ಪ್ರಿಯರಿಗೆ ಹಬ್ಬದೂಟ ಉಣಿಸಿದಂತಾಗಿದೆ.

'ಟಾಕ್ಸಿಕ್' ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರು ದ್ವಿಪಾತ್ರದಲ್ಲಿ (Dual Role) ಕಾಣಿಸಿಕೊಳ್ಳುತ್ತಿರುವುದು ಈಗಾಗಲೇ ಅಭಿಮಾನಿಗಳಲ್ಲಿ ಮತ್ತು ಚಿತ್ರರಂಗದಲ್ಲಿ ಭಾರಿ ಕುತೂಹಲವನ್ನು ಮೂಡಿಸಿದೆ. ಚಿತ್ರದಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಭಾರತೀಯ ಚಿತ್ರರಂಗದ ದಂಡೇ ನಟಿಸುತ್ತಿರುವುದರಿಂದ ತಾರಾಗಣ ಅತ್ಯಂತ ಶಕ್ತಿಶಾಲಿಯಾಗಿದೆ.

ಚಿತ್ರದ ನಾಯಕ ಯಶ್ ಯಾರ ಜೊತೆ ಹೋರಾಡುತ್ತಾರೆ (ಫೈಟ್) ಮತ್ತು ಯಾರ ಜೊತೆ ಪ್ರೇಮ ಸಲ್ಲಾಪ (ರೊಮ್ಯಾನ್ಸ್) ನಡೆಸುತ್ತಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ನಿರಂತರವಾಗಿ ಕಾಡುತ್ತಿತ್ತು. ಆದರೆ, ಈಗ ತಾರಾ ಸುತಾರಿಯಾ ಜೊತೆಗಿನ ಈ 'ಮನಮೋಹಕ' ಹಾಡು ಬಿಡುಗಡೆಯಾಗುವ ಮೂಲಕ ಚಿತ್ರದ ಕಥಾಹಂದರದ ಮೇಲಿನ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.  ಮೊದಲ ಹಾಡಿಗೆ ಸಿಕ್ಕ ಅಭೂತಪೂರ್ವ ಅಭಿನಂದನೆಗಳ ನಂತರ, ಈ ಮಧುರವಾದ ಗೀತೆಯು ಯಶ್ ಅಭಿಮಾನಿಗಳಲ್ಲಿ ಹಾಗೂ ಚಲನಚಿತ್ರ ಪ್ರೇಮಿಗಳಲ್ಲಿ ಚಿತ್ರದ ಮೇಲಿದ್ದ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟುಗೊಳಿಸಿದೆ.

ಪ್ರಸ್ತುತ ಯೂಟ್ಯೂಬ್ ಮತ್ತು ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ 'ಮನಮೋಹಕ' ಹಾಡು ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ದಾಖಲೆ ಬರೆಯುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಅವರ ಮಾಸ್ ಹಾಗೂ ಕ್ಲಾಸ್ ಲುಕ್ ಮತ್ತು ತಾರಾ ಸುತಾರಿಯಾ ಅವರ ಸೌಂದರ್ಯಕ್ಕೆ ಪ್ರೇಕ್ಷಕರು ಮರುಳಾಗಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪ್ಯಾನ್-ಇಂಡಿಯಾ ಸಿನಿಮಾ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದ್ದು, ಪ್ರತಿಯೊಂದು ಅಪ್‌ಡೇಟ್ ಸಹ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ. ಈ ಹೊಸ ಹಾಡು ಚಿತ್ರದ ಪ್ರಚಾರಕ್ಕೆ ಭಾರಿ ದೊಡ್ಡ ಬಲ ತಂದುಕೊಟ್ಟಿದ್ದು, ಯಶ್ ಅಭಿಮಾನಿಗಳು ಹಾಡನ್ನು ಸಂಭ್ರಮಿಸುತ್ತಿದ್ದಾರೆ.

Toxic

Comments

Sign in to comment
Please to leave a comment on this article.
Top Stories
Subscribe to Our Newsletter

Get the latest articles delivered to your inbox.

Rakul Preet Singh Enjoys a Lovely Outing with Her Boyfriend
Rakul Preet Singh Enjoys a Lovely Outing with Her Boyfriend