ಸೀತಾ ರಾಮಂ ಡೈರೆಕ್ಟರ್ ಜಾದೂ - ಪ್ರಭಾಸ್ ಹೊಸ ಸಿನಿಮಾ ‘ಫೌಜಿ’ ಬಿಡುಗಡೆ ದಿನಾಂಕ ಫಿಕ್ಸ್!!

By Vinay Kulkarni Published: Jul 16, Thursday, 2026, 15:26 [IST]

ಭಾರತೀಯ ಚಿತ್ರರಂಗದ 'ಬಾಹುಬಲಿ', ರೆಬೆಲ್ ಸ್ಟಾರ್ ಪ್ರಭಾಸ್ ಸಾಲು ಸಾಲು ಪ್ಯಾನ್-ಇಂಡಿಯಾ ಸಿನಿಮಾಗಳ ಮೂಲಕ ಬಾಕ್ಸ್ ಆಫೀಸ್ ಧೂಳೀಪಟ ಮಾಡಲು ಸಜ್ಜಾಗುತ್ತಿದ್ದಾರೆ. ಸದ್ಯ ಹಲವು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಪ್ರಭಾಸ್, ಒಂದರ ಬೆನ್ನಲ್ಲೇ ಮತ್ತೊಂದು ಸಿನಿಮಾದ ಶೂಟಿಂಗ್ ಮುಗಿಸುತ್ತಾ ನಟನಾ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ಮುಳುಗಿದ್ದಾರೆ. ಸದ್ಯ ಇಡೀ ಚಿತ್ರರಂಗವೇ ಕಾತರದಿಂದ ಕಾಯುತ್ತಿರುವ ಅವರ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ಫೌಜಿ’ (Fauji) ಕೂಡ ಸೇರಿದೆ.

https://www.instagram.com

ವಿಶೇಷವೆಂದರೆ, ಟಾಲಿವುಡ್‌ನ ಕ್ರೇಜಿ ಪ್ರೊಜೆಕ್ಟ್‌ಗಳಾದ ‘ಕಲ್ಕಿ 2898 ಎಡಿ’ ಮತ್ತು ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಸ್ಪಿರಿಟ್’ ಸಿನಿಮಾಗಳ ಕತೆಯನ್ನು ಪ್ರಭಾಸ್ ಅವರು ಮೊದಲೇ ಕೇಳಿದ್ದರೂ ಸಹ, ‘ಫೌಜಿ’ ಸಿನಿಮಾದ ಚಿತ್ರೀಕರಣವನ್ನು ಆ ಎರಡೂ ಸಿನಿಮಾಗಳಿಗಿಂತಲೂ ಮೊದಲೇ ಪ್ರಾರಂಭಿಸಿದ್ದರು. ಇದಕ್ಕೆ ಮುಖ್ಯ ಕಾರಣ, ನಿರ್ದೇಶಕ ಹನು ರಾಘವಪುಡಿ ಅವರು ಸಿದ್ಧಪಡಿಸಿದ್ದ ಈ ಚಿತ್ರದ ಕಥೆ ಪ್ರಭಾಸ್ ಅವರಿಗೆ ಅತಿಯಾಗಿ ಇಷ್ಟವಾಗಿದ್ದು. ಕಥೆಯ ಮೇಲೆ ಅಪಾರ ನಂಬಿಕೆ ಹಾಗೂ ಭಾರಿ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಪ್ರಭಾಸ್, ಈ ಚಿತ್ರಕ್ಕೆ ಮೊದಲ ಆದ್ಯತೆ ನೀಡಿ ಕ್ಯಾಮೆರಾ ಎದುರಿಸಿದ್ದರು. ಇದೀಗ ಅಭಿಮಾನಿಗಳ ಬಹುದಿನಗಳ ಕಾಯುವಿಕೆಗೆ ತೆರೆ ಬಿದ್ದಿದ್ದು, ಚಿತ್ರತಂಡ ಅಧಿಕೃತ ಪೋಸ್ಟರ್ ಜೊತೆಗೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ.

ಹನು ರಾಘವಪುಡಿ ಮ್ಯಾಜಿಕ್

ತೆಲುಗು ಚಿತ್ರರಂಗದಲ್ಲಿ ಕ್ಲಾಸಿಕ್ ಮತ್ತು ಕಲ್ಟ್ ಲವ್ ಸ್ಟೋರಿಗಳಿಗೆ ಹೆಸರಾದವರು ನಿರ್ದೇಶಕ ಹನು ರಾಘವಪುಡಿ. ಕೆಲ ವರ್ಷಗಳ ಹಿಂದೆ ಅವರು ನಿರ್ದೇಶಿಸಿದ್ದ ‘ಸೀತಾ ರಾಮಂ’ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದ್ದಲ್ಲದೆ, ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ವಿಶೇಷವೆಂದರೆ, ‘ಸೀತಾ ರಾಮಂ’ ಕೂಡ ಒಬ್ಬ ಸೈನಿಕನ (ದುಲ್ಕರ್ ಸಲ್ಮಾನ್) ಸುಂದರ ಹಾಗೂ ಭಾವನಾತ್ಮಕ ಪ್ರೇಮಕಥೆಯನ್ನು ಒಳಗೊಂಡಿತ್ತು.

ಗಮನಾರ್ಹ ಸಂಗತಿ: ಈ ಬಾರಿ ಹನು ರಾಘವಪುಡಿ ಅವರು ಪ್ರಭಾಸ್ ಅವರನ್ನು ಮುಖ್ಯ ಭೂಮಿಕೆಯಲ್ಲಿಟ್ಟುಕೊಂಡು ‘ಫೌಜಿ’ ಚಿತ್ರವನ್ನು ಸಿದ್ಧಪಡಿಸುತ್ತಿದ್ದಾರೆ. ಸಿನಿಮಾದ ಹೆಸರೇ ಸೂಚಿಸುವಂತೆ, ರೆಬೆಲ್ ಸ್ಟಾರ್ ಈ ಚಿತ್ರದಲ್ಲಿ ಆರ್ಮಿ ಆಫೀಸರ್ ಅಥವಾ ಸೈನಿಕನ ಪ್ರಬಲ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸೈನಿಕನ ದೇಶಭಕ್ತಿ, ಯುದ್ಧ ಭೂಮಿಯ ಹೋರಾಟ ಹಾಗೂ ಆತನ ವೈಯಕ್ತಿಕ ಜೀವನದ ಪ್ರೇಮಕಥೆ ಈ ಚಿತ್ರದ ಪ್ರಮುಖ ಜೀವಾಳ ಎನ್ನಲಾಗಿದೆ.

ಮದುವೆ ವರನ ಲುಕ್, ಕೈಯಲ್ಲಿ ಗನ್

ಚಿತ್ರತಂಡ ಬಿಡುಗಡೆ ಮಾಡಿರುವ ‘ಫೌಜಿ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ತಲ್ಲಣ ಸೃಷ್ಟಿಸಿದೆ. ಪ್ರಭಾಸ್ ಫ್ಯಾನ್ಸ್ ಈ ಪೋಸ್ಟರ್ ನೋಡಿ ಫಿದಾ ಆಗಿದ್ದಾರೆ. ಪೋಸ್ಟರ್‌ನಲ್ಲಿರುವ ವಿಶ್ಯುಯಲ್ಸ್ ಚಿತ್ರದ ಮೇಲಿನ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಪ್ರಭಾಸ್ ಡಿಫರೆಂಟ್ ಲುಕ್

ಆಕ್ಷನ್ ಮತ್ತು ರಕ್ತಪಾತ: ಮದುವೆ ಮುಹೂರ್ತದ ಲುಕ್‌ನಲ್ಲಿದ್ದರೂ, ಪ್ರಭಾಸ್ ಕೈಯಲ್ಲಿ ಮಾರಕ ಬಂದೂಕು (ಗನ್) ಹಿಡಿದುಕೊಂಡು ಗಂಭೀರವಾಗಿ ಕುಳಿತಿದ್ದಾರೆ. ಅವರ ಇಡೀ ದೇಹ ರ*ಕ್ತದಿಂದ ಒದ್ದೆಯಾಗಿದೆ.

ಹಿನ್ನೆಲೆಯ ಭೀಕರತೆ: ಪ್ರಭಾಸ್ ಅವರ ಹಿನ್ನೆಲೆಯಲ್ಲಿ ಹಲವಾರು ಶವಗಳು ಬಿದ್ದಿರುವುದನ್ನು ಪೋಸ್ಟರ್‌ನಲ್ಲಿ ಕಾಣಬಹುದು. ಇದು ಚಿತ್ರದಲ್ಲಿನ ಭೀಕರ ಯುದ್ಧ ಅಥವಾ ಸಂಘರ್ಷದ ದೃಶ್ಯವನ್ನು ಬಿಂಬಿಸುತ್ತದೆ.

ಕ್ಯಾಚಿ ಟ್ಯಾಗ್ ಲೈನ್: ಪೋಸ್ಟರ್‌ನಲ್ಲಿ ‘ಬಟಾಲಿಯನ್ ಹೂ ಫೈಟ್ಸ್ ಅಲೋನ್’ (Battalion Who Fights Alone) ಎಂಬ ಪವರ್‌ಫುಲ್ ಟ್ಯಾಗ್ ಲೈನ್ ನೀಡಲಾಗಿದೆ. ಇದು ನಾಯಕನ ಒಂಟಿ ಹೋರಾಟದ ತೀವ್ರತೆಯನ್ನು ಸಾರುತ್ತದೆ.

ಈ ವಿಭಿನ್ನ ಪೋಸ್ಟರ್ ಮೂಲಕ ಚಿತ್ರವು ಕೇವಲ ಸಾಫ್ಟ್ ಪ್ರೇಮಕಥೆಯಾಗಿರದೆ, ಹೈ-ವೋಲ್ಟೇಜ್ ಆಕ್ಷನ್ ಎಲಿಮೆಂಟ್ಸ್ ಒಳಗೊಂಡಿರುವ ಆಕ್ಷನ್ ಡ್ರಾಮಾ ಎಂಬುದು ಸ್ಪಷ್ಟವಾಗಿದೆ. ಜೊತೆಗೆ, ಸಿನಿಮಾ ಡಿಸೆಂಬರ್ 3 ರಂದು ವಿಶ್ವಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ದಿನಾಂಕವನ್ನು ಲಾಕ್ ಮಾಡಿದೆ.

ಭರ್ಜರಿ ಆಕ್ಷನ್ ಜೊತೆಗೆ ರೋಮ್ಯಾಂಟಿಕ್ ಟಚ್

‘ಫೌಜಿ’ ಸಿನಿಮಾದಲ್ಲಿ ಆಕ್ಷನ್ ಬ್ಲಾಸ್ಟ್‌ಗಳ ಜೊತೆಗೆ ಹನು ರಾಘವಪುಡಿ ಶೈಲಿಯ ಅಪ್ಪಟ ಪ್ರೇಮಕಥೆಯೂ ಇರಲಿದೆ. ಈ ಚಿತ್ರದ ಮೂಲಕ ಭಾರತೀಯ ಚಿತ್ರರಂಗಕ್ಕೆ ಹೊಸ ನಾಯಕಿಯೊಬ್ಬರ ಪರಿಚಯವಾಗುತ್ತಿದೆ. ಅವರೇ ಇಮಾನ್ವಿ ಇಸ್ಮಾಯಿಲ್.

ಅಮೆರಿಕಾದಲ್ಲಿ ಸ್ವಂತ ಡ್ಯಾನ್ಸ್ ಸ್ಟುಡಿಯೋ ಹೊಂದಿರುವ ಇಮಾನ್ವಿ, ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅದ್ಭುತ ನೃತ್ಯದ ಮೂಲಕ ಈಗಾಗಲೇ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ಉತ್ತಮ ನೃತ್ಯಗಾರ್ತಿ ಹಾಗೂ ನಟನಾ ಕೌಶಲ ಹೊಂದಿರುವ ಇಮಾನ್ವಿಗೆ ಇದು ಮೊದಲ ಬೆಳ್ಳಿಪರದೆ ಸಿನಿಮಾವಾಗಿದೆ. ಮೊದಲ ಚಿತ್ರದಲ್ಲೇ ಪ್ಯಾನ್-ಇಂಡಿಯಾ ಸ್ಟಾರ್ ಪ್ರಭಾಸ್ ಅವರಿಗೆ ಜೋಡಿಯಾಗುವ ಸುವರ್ಣಾವಕಾಶ ಇಮಾನ್ವಿ ಪಾಲಿಗೆ ಸಿಕ್ಕಿದೆ. ಪೋಸ್ಟರ್‌ನಲ್ಲಿ ಕಾಣಿಸಿರುವ ಆಕ್ಷನ್ ಲುಕ್ ಮತ್ತು ಇಮಾನ್ವಿ ಜೊತೆಗಿನ ರೋಮ್ಯಾಂಟಿಕ್ ಕೆಮಿಸ್ಟ್ರಿ ಸಿನಿಮಾದ ಪ್ರಮುಖ ಆಕರ್ಷಣೆಯಾಗಲಿದೆ ಎಂದು ಗಾಂಧಿನಗರದ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

'ಮೈತ್ರಿ ಮೂವಿ ಮೇಕರ್ಸ್' ಬಂಡವಾಳ

ಟಾಲಿವುಡ್‌ನ ಪ್ರತಿಷ್ಠಿತ ಹಾಗೂ ಯಶಸ್ವಿ ನಿರ್ಮಾಣ ಸಂಸ್ಥೆಯಾದ ‘ಮೈತ್ರಿ ಮೂವಿ ಮೇಕರ್ಸ್’ (Mythri Movie Makers) ಈ ಚಿತ್ರಕ್ಕೆ ಭಾರಿ ವೆಚ್ಚದಲ್ಲಿ ಬಂಡವಾಳ ಹೂಡಿದೆ. ಗುಣಮಟ್ಟದ ಸಿನಿಮಾಗಳನ್ನು ನೀಡುವುದರಲ್ಲಿ ಹೆಸರುವಾಸಿಯಾಗಿರುವ ಮೈತ್ರಿ ಸಂಸ್ಥೆ, ಪ್ರಭಾಸ್ ಮತ್ತು ಹನು ಕಾಂಬಿನೇಷನ್ ಚಿತ್ರವನ್ನು ಅತ್ಯಂತ ಅದ್ದೂರಿಯಾಗಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ನಿರ್ಮಾಣ ಮಾಡುತ್ತಿದೆ.

Fauji Movie

Comments

Sign in to comment
Please to leave a comment on this article.
Top Stories
Subscribe to Our Newsletter

Get the latest articles delivered to your inbox.

Rakul Preet Singh Enjoys a Lovely Outing with Her Boyfriend
Rakul Preet Singh Enjoys a Lovely Outing with Her Boyfriend